Skip to content

Yugantara – Kannada Play

November 8, 2016

ರಂಗ ಶಂಕರ ನಾಟಕೋತ್ಸವ 2016 – ನಾಟ್ ದ ಮೆಟ್ರೋ

ನಟನ, ಮೈಸೂರು ಪ್ರಸ್ತುತ ಪಡಿಸುವ ನಾಟಕ “ಯುಗಾಂತರ”

ರಚನೆ : ವಿ.ಕೃ.ಗೋಕಾಕ್
ನಿರ್ದೇಶನ: ಮಂಜುನಾಥ್ ಬಡಿಗೇರ್

yugantara-kannada-play-by-natana-mysore-at-ranga-shankara-bengaluruವಿ.ಕೃ ಗೋಕಾಕರು ಈ ನಾಟಕವನ್ನು ಬರೆದ ಕಾಲಕ್ಕೆ “ಹೊಸ ಬಾಳಿನ ಸುಕುಮಾರ ಪ್ರಯೋಗ” ಎಂದು ಕರೆದುಕೊಂಡಿದ್ದಾರೆ. ಭಾರತವು ಸ್ವಾತಂತ್ರ ರಾಷ್ಟ್ರವಾಗುವ ಪರ್ವಕಾಲದಲ್ಲಿ ಈ ನಾಟಕ ಕೃತಿ ರಚಿತವಾಗಿದ್ದು; ಮಾರ್ಕ್ಸ್ ವಿಚಾರಧಾರೆಯನ್ನು ನಂಬಿದ ಮೃಣಾಲಿನಿ ಮತ್ತು ಕವಿಯಾದ ಕೋಸಲೇಂದ್ರ ಎಂಬ ಎರಡು ಪಾತ್ರಗಳನ್ನು ಮುಖಾಮುಖಿಯಾಗಿಸಿ ಆ ಮೂಲಕ ಬದುಕಿನ ಸತ್ಯವನ್ನು ಹುಡುಕುವ ಪ್ರಯತ್ನಮಾಡಿದ್ದಾರೆ. ಆ ಕಾಲದಲ್ಲಿ ಮಾರ್ಕ್ಸ್ ಸಮತಾವಾದದ ಚಿಂತನೆಯು ಇಡೀ ಪ್ರಪಂಚವನ್ನೇ ಆವರಿಸಿ ಹೊಸದೊಂದು ಕ್ರಾಂತಿಗೆ ಕಾರಣವಾಗಿತ್ತು. ಆ ಕ್ರಾಂತಿಯ ಪರಿಣಾಮ ಭಾರತವನ್ನೂ ಪ್ರಭಾವಿಸಿ ಸಾಮಾನ್ಯ ಜನರ ಬದುಕಿನಲ್ಲೂ ಬದಲಾವಣೆಗೆ ಕಾರಣವಾಯಿತು. ಮೇಲ್ನೋಟಕ್ಕೆ ಇದೊಂದು ರಾಜಕೀಯ ನಾಟಕವಾಗಿ ಕಂಡರೂ ಅದರ ಮುಖ್ಯ ಉದ್ದೇಶ ಮನುಷ್ಯನ ಮನುಷ್ಯತ್ವದ ಮೂಲವಾದ ಪ್ರೀತಿ, ಸ್ನೇಹ, ಕರುಣೆ, ಸೌಂದರ್ಯ ಇವುಗಳನ್ನು ಎತ್ತಿಹಿಡಿಯುತ್ತದೆ.

ಸಮಾಜದ ಕೆಲವು ವ್ಯಕ್ತಿಗಳನ್ನು ಕೇಂದ್ರೀಕರಿಸಿಕೊಂಡು ಪ್ರಾರಂಭವಾಗುವ ಈ ನಾಟಕವು ಮುಂದುವರಿದಂತೆ ವ್ಯಕ್ತಿಯ ಅಂತರಾಳವನ್ನು ಆವರಿಸುವ ಜೊತೆಗೆ ಇಡೀ ದೇಶವನ್ನೇ ಆವರಿಸಿಕೊಳ್ಳುತ್ತದೆ. ಆ ಮೂಲಕ ವ್ಯಕ್ತಿಯ ಸಮಸ್ಯೆಗಳಿಗೂ ದೇಶದ ಸಮಸ್ಯೆಗಳಿಗೂ ಒಂದೇ ಬಾರಿ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತದೆ. ಈ ಕಾರಣಕ್ಕೆ ಇದೊಂದು ಶ್ರೇಷ್ಠ ಕೃತಿ ಎಂದು ನನ್ನ ಭಾವನೆ.

ಇಂದು ಭಾರತವು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಪ್ರಬಲ ರಾಷ್ಟ್ರವಾಗಿ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ಅದರ ಜೊತೆ ಜೊತೆಗೇ ಅಂದಿಗಿಂತ ಹೆಚ್ಚಿನ ಮತ್ತು ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದೆ. ಈ ಅಭಿವೃದ್ಧಿಯ ವೇಗದಲ್ಲಿ ಮನುಷ್ಯ ಸಂಬಂಧಗಳು ಸಡಿಲವಾಗಿ, ಮನುಷ್ಯತ್ವದ ಮೂಲ ಸೆಲೆಗಳು ಬತ್ತುತ್ತಿವೆ. ವಿಜ್ಞಾನವು ಮನುಷ್ಯನ ಅಹಂಕಾರವನ್ನು ಮತ್ತಷ್ಟು ಜಾಗ್ರತಗೊಳಿಸುತ್ತಿದೆ. ಪೊಳ್ಳು ರಾಷ್ಟ್ರೀಯವಾದ, ಕೋಮುವಾದ, ವರ್ಗ ಸಂಘರ್ಷ, ಮೂಢನಂಬಿಕೆಗಳು ಬಂಡವಾಳಶಾಹಿ ಸಂಸ್ಥೆಗಳಿಂದ ಮೊದಲಿಗಿಂತಲೂ ಇಂದು ಮೂರು ಪಟ್ಟು ಹೆಚ್ಚಿದೆ. ಒಂದುಕಾಲದಲ್ಲಿ ಮೌಲ್ಯಾಧಾರಿತ ಜೀವನಕ್ಕೆ, ಆದರ್ಶಕ್ಕೆ, ತತ್ವಕ್ಕೆ ಬದುಕುತ್ತಿದ್ದ ಯುವ ಸಮೂಹ ಇಂದು ಕೇವಲ ಅರ್ಥ ಆಧಾರಿತ ಬದುಕು ನಡೆಸುತ್ತಿದ್ದಾರೆ. ಎಲ್ಲವನ್ನು ಮಾರಾಟಕ್ಕಿಟ್ಟಿರುವ ಇಂದಿನ ಮಾರುಕಟ್ಟೆ ಜಗತ್ತಿನಲ್ಲಿ ಈ ರಂಗಪ್ರಯೋಗದ ಅಗತ್ಯವಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ತನ್ನನ್ನ ತಾನು ಹುಡುಕಿಕೊಳ್ಳುವ ಸ್ವಯಂ ಪೂರ್ಣತೆಯನ್ನು ಸ್ಥಾಪಿಸಿಕೊಳ್ಳುವ ಮಾರ್ಗವನ್ನೂ ಇದು ಹುಡುಕುತ್ತಿದೆ.

ಇಂಥ ವಸ್ತುವನ್ನು ನಾಟ್ಯಪ್ರಧಾನವಾದ ನನ್ನ ಕಾವ್ಯಾತ್ಮಕ ಅಭಿನಯ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಅಭಿನಯ ಮಾರ್ಗದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಪೂರ್ಣತೆಯನ್ನು ಸ್ಥಾಪಿಸುವ ಹುಡುಕಾಟ ನಡೆಸಿದ್ದೇನೆ.

Yugantara – Kannada Play by Natana Mysore

Tickets available at #RangaShankara box office also online on Bookmyshow

Wednesday 9th November 2016 | 7:30 PM

Venue:
Ranga Shankara
36/2, 8th Cross,
(Next to J P Nagar Post Office)
2nd Phase, JP Nagar,
Bangalore 560 078.

Directions to the Venue: http://binged.it/1SJgAhV

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: