Skip to content

Maiya Yaksha Habba 2017 (Yakshagana)

June 27, 2017

‘Manooru Mayya Yakshakala Pratishthana’, Bengaluru is organising Maiya Yaksha Habba 2017 (Yakshagana) performed by Sri.Saligrama Mela and Guest artists

ಮಯ್ಯ ಮತ್ತು ಮಯ್ಯ ಯಕ್ಷಹಬ್ಬ- 2017
01.07.2017, ಶನಿವಾರ ರಾತ್ರಿ 10 ರಿಂದ
ರವೀಂದ್ರ ಕಲಾಕ್ಷೇತ್ರ,
ಜಯಚಾಮರಾಜೇಂದ್ರ ರಸ್ತೆ,
ಬೆಂಗಳೂರು

ಯಕ್ಷಗಾನದ ಉಭಯ ತಿಟ್ಟುಗಳ ಪ್ರತಿಭಾನ್ವಿತ ಭಾಗವತ ಶ್ರೀ ರಾಘವೇಂದ್ರ ಮಯ್ಯ ಹಾಲಾಡಿ (Raghavendra Maiyya Haladi)

ಯಕ್ಷಗಾನದಲ್ಲಿ ತನ್ನದೇ ಆದ ಶೈಲಿಯಿಂದ ಅಭಿಮಾನಿಗಳ ಸ್ನೇಹ-ವಿಶ್ವಾಸ-ಪ್ರೀತಿ ಗಳಿಸಿರುವ ಸ್ನೇಹಜೀವಿ-ಸರಳ ಸಜ್ಜನ ಶ್ರೀ ಮಯ್ಯರು ಶ್ರೀ ಕಾಳಿಂಗ ನಾವಡರ ನೆನಪಿನ ಜೊತೆ-ಜೊತೆಗೆ ಯಕ್ಷಮಾತೆಯ ಸೇವೆಯಲ್ಲಿ ತಮ್ಮನ್ನು ಕಳೆದ 35 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ತಮ್ಮ ಹದಿನೈದನೇ ವಯಸ್ಸಿನಲ್ಲಿ ರಂಗಸ್ಥಳದಲ್ಲಿ ಹೊರಹೊಮ್ಮಿದ ಮಯ್ಯರಿಗೆ ಯಕ್ಷ ದಿಗ್ಗಜ ಶ್ರೀ ನಾರಣಪ್ಪ ಉಪ್ಪೂರರು ಮೊದಲ ಗುರುಗಳು. 1982ರಲ್ಲಿ ಸಂಗೀತಗಾರನಾಗಿ ಕೋಟ ಶ್ರೀ ಅಮೃತೇಶ್ವರಿ ಮೇಳದಲ್ಲಿ ತಮ್ಮ ಯಕ್ಷಕಲಾಸೇವೆ ಆರಂಭಿಸಿದ ಮಯ್ಯರು, 1986-87ರಲ್ಲಿ ಹಾಲಾಡಿ ಮೇಳದ ಎರಡನೇ ಭಾಗವತರಾಗಿ ಸೇವೆ ಸಲ್ಲಿಸಿದರು. ನಂತರ ಸೌಕೂರು, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ, ಈಗ ಕಳೆದ 20 ವರ್ಷಗಳಿಂದ ಮುಖ್ಯ ಭಾಗವತರಾಗಿ, ದಿವಂಗತ ಶ್ರೀ ಕಾಳಿಂಗ ನಾವಡರ ಸಮರ್ಥ ಉತ್ತರಾಧಿಕಾರಿಯಾಗಿ ತನ್ನ ಐವತ್ತನೇ ವರ್ಷದ ‘ಸ್ವರ್ಣ ಮಹೋತ್ಸವ’ದ ಹೊಸ್ತಿಲಲ್ಲಿರುವ ಶ್ರೀ ಸಾಲಿಗ್ರಾಮ ಮೇಳದ ದಕ್ಷ ಭಾಗವತರಾಗಿ ಯಕ್ಷ ಸೇವೆ ಮಾಡುತ್ತಿದ್ದಾರೆ. ಹಿಂದಿನ ಮತ್ತು ಇಂದಿನ ತಲೆಮಾರಿನ ಕಲಾವಿದರನ್ನು ಕುಣಿಸಿದ ಹಿರಿಮೆ ಮಯ್ಯರದು.

ಶ್ರೀ ರಮೇಶ್ ಬೇಗಾರ್ ಶೃಂಗೇರಿಯವರ ಸಾರಥ್ಯದ ಶ್ರೀ ಕಾಳಿಂಗ ನಾವಡ ಪ್ರತಿಷ್ಥಾನ ಹಾಗೂ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ನೀಡಿದ ‘ರಾಗ ಸ್ವರ ಸಿರಿ’ ಬಿರುದು ಹಾಗೂ ಶ್ರೀ ಕಾಳಿಂಗ ನಾವಡ ವಿಂಶತಿ ಪ್ರಶಸ್ತಿ-‘ಕಾಳಿಂಗ ನಾವಡ ಯುವರಂಗ ಸಮ್ಮಾನ್’, ಬೆಂಗಳೂರು ಹೋಟೆಲ್ ಸಹಕಾರ ಬ್ಯಾಂಕ್ ನ ‘ಕವಿ ಮುದ್ದಣ ಪ್ರಶಸ್ತಿ’, ಕೂಟಮಹಾಜಗತ್ತು ಸಾಲಿಗ್ರಾಮ (ರಿ)-ಬೆಂಗಳೂರು ಅಂಗಸಂಸ್ಥೆ ಕೊಡಮಾಡುವ ‘ನರಸಿಂಹ ಪ್ರಶಸ್ತಿ’, ಉಡುಪಿ ‘ಜಿಲ್ಲಾ ಕನ್ನಡ ರಾಜ್ಯೋತ್ಸವ’ ಪ್ರಶಸ್ತಿ, ಕುಂದಾಪುರದಲ್ಲಿ ಅಭಿಮಾನಿಗಳಿಂದ ‘ಸ್ವರ ಸ್ನೇಹ ಸಂಜೀವಿನಿ’ ಬಿರುದು, ಹೈದರಾಬಾದ್ ನಲ್ಲಿ ಅಭಿಮಾನಿಗಳಿಂದ ‘ಯಕ್ಷಸಿರಿ’ ಪ್ರಶಸ್ತಿಯೂ ಸೇರಿದಂತೆ ಅಸಂಖ್ಯ ಗೌರವ-ಸನ್ಮಾನಗಳು ಮಯ್ಯರಿಗೆ ಸಂದಿವೆ.

ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ ಶ್ರೀ ಮಣೂರು ವಾಸುದೇವ ಮಯ್ಯ ರವರ ಸಾರಥ್ಯದ ‘ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ’ವು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದ್ದು ಈಗಾಗಲೇ ಹಲವಾರು ಕಲಾವಿದರನ್ನು ಗುರುತಿಸಿ ಗೌರವಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಯಕ್ಷರಸಿಕರ ಮನದುಂಬುವಂತೆ ಮಾಡಿದೆ. ಕಲಾವಿದರ ಹಾಗೂ ಪ್ರೇಕ್ಷಕರ ಹಿತಚಿಂತನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ‘ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ’ ರಾಜಧಾನಿಯಲ್ಲಿ ಹಲವಾರು ಸುಪ್ರಸಿದ್ಧ ಕಲಾವಿದರ ಸಮಾಗಮದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದೆ

‘ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ’ವು ಇದೀಗ ‘ಮಯ್ಯ ಮತ್ತು ಮಯ್ಯ ಯಕ್ಷಹಬ್ಬ- 2017’ ಸಂಭ್ರಮವನ್ನು ಪ್ರಸಿದ್ಧ ಭಾಗವತರಾದ ಶ್ರೀ ರಾಘವೇಂದ್ರ ಮಯ್ಯ ಹಾಲಾಡಿಯವರ ಗಾನಸುಧೆಯಲ್ಲಿ, ಶ್ರೀ ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರಿಂದ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 01.07.2017ರ ಶನಿವಾರ ರಾತ್ರಿ 10ರಿಂದ ‘ಸುದರ್ಶನ ವಿಜಯ’, ‘ಗದಾಯುದ್ಧ’ ಮತ್ತು ‘ಅಭಿಮನ್ಯು’ ಪ್ರಸಂಗಗಳನ್ನು ಆಯೋಜಿಸಿದೆ ಹಾಗೂ ಶ್ರೀ ರಾಘವೇಂದ್ರ ಮಯ್ಯ ಹಾಲಾಡಿಯವರಿಗೆ ಸನ್ಮಾನವು ಜರುಗಲಿದೆ

ವಿಶೇಷಗಳು :
ಸರ್ವಶ್ರೀ ರಾಘವೇಂದ್ರ ಮಯ್ಯ ಹಾಲಾಡಿ, ಮಹಾನಗರದಲ್ಲಿ ಶ್ರೀ ನಗರ ಸುಬ್ರಮಣ್ಯ ಆಚಾರ್ ರವರ ಅಪರೂಪದ ಭಾಗವತಿಕೆ, ಆನಂದ ಅಂಕೋಲ ಮತ್ತು ಉದಯ ಹೊಸಾಳ ರವರ ಗಾನಸುಧೆ
ಮಹಾನಗರದಲ್ಲಿ ಪ್ರಥಮ ಬಾರಿಗೆ ತೆಂಕು-ಬಡಗಿನ ಹಿರಿಯ ಕಲಾವಿದ ಶ್ರೀ ಯಳ್ಳಂಪಳ್ಳಿ ಜಗನ್ನಾಥ ಆಚಾರ್ಯರ ‘ಶತ್ರುಪ್ರಸೂದನ’
ಶ್ರೀ ಕೃಷ್ಣಮೂರ್ತಿ ತುಂಗ ಮತ್ತು ತಂಡದವರಿಂದ ಸಾಂಪ್ರದಾಯಿಕ ಸಪ್ತ ರಾಕ್ಷಸರ ಏಕಕಾಲದ ತೆರೆ ಒಡ್ಡೋಲಗ (ಸಂಸಪ್ತಕರು)
ಶ್ರೀ ಶಶಿಕಾಂತ ಶೆಟ್ಟಿಯವರ ‘ಕೌರವ’
ಚಂಡೆ-ಮದ್ದಳೆಯಲ್ಲಿ ಸರ್ವಶ್ರೀ ರಾಕೇಶ್ ಮಲ್ಯ, ಶಿವಾನಂದ ಕೋಟ, ಪರಮೇಶ್ವರ ಭಂಡಾರಿ, ನಾಗರಾಜ ಭಂಡಾರಿ
ಮುಮ್ಮೇಳ: ಸರ್ವಶ್ರೀ ಜಲವಳ್ಳಿ ವಿದ್ಯಾಧರ ರಾವ್, ಮಂಕಿ ಈಶ್ವರ ನಾಯಕ್, ಡಾ ಪ್ರದೀಪ ಸಾಮಗ, ಬಳ್ಕೂರು ಕೃಷ್ಣ ಯಾಜಿ, ಅರುಣ್ ಕುಮಾರ್ ಜಾರ್ಕಳ, ವಾಸುದೇವ ರಂಗಾ ಭಟ್, ಪ್ರಸನ್ನ ಶೆಟ್ಟಿಗಾರ್, ರಾಜೇಶ ಭಂಡಾರಿ, ಕ್ಯಾದಗಿ ಮಹಾಬಲೇಶ್ವರ ಭಟ್, ಆರ್ಗೋಡು ಮೋಹನದಾಸ ಶೆಣೈ, ತುಂಬ್ರಿ ಭಾಸ್ಕರ, ಚಂದ್ರಹಾಸ ಗೌಡ, ವಂಡಾರು ಗೋವಿಂದ, ಗಾ೦ವ್ಕರ್, ನಾಗರಾಜ, ಗುಂಡಬಾಳ, ಕುಂಕಿಪಾಲ್, ಜಪ್ತಿ, ಷಣ್ಮುಖ ಮತ್ತಿತರರು ಬಣ್ಣ ಹಚ್ಚಲಿದ್ದಾರೆ.

ಟಿಕೆಟ್ ದರ ಇರುತ್ತದೆ ಸಂಪರ್ಕ-ಜಗನ್ನಾಥ ಹೆಗಡೆ-99008 08109, ರಮೇಶ್ ಬೇಗಾರ್ ಶೃಂಗೇರಿ – 94481 01708

Yakshagana:
Sudarshana Vijaya, Gadayuddha and Abhimanyu
will be performed on Saturday, 1st July 2017 from 10:00 PM onwards

Tickets will be available at the Venue.
for Tickets contact: Sri Jagannatha Hegde-99008 08109, Sri Ramesh Begar Sringeri-94481 01708

Venue:
Ravindra Kalakshetra,
J.C Road,
Bengaluru

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: